ನಮ್ಮ ಬಗ್ಗೆ

ನಮ್ಮ ಬಗ್ಗೆ

ಪರಿಚಯ:ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ

ಅಂದಿನ ಕೇಂದ್ರ ರೈಲ್ವೆ ಮಂತ್ರಿಗಳಾದ ಮಾನ್ಯ ಶ್ರೀ ಡಾ.ಮಲ್ಲಿಕಾರ್ಜುನ ಖರ್ಗೆ, ಪ್ರಸಕ್ತ ಲೋಕಸಭಾ ಸದಸ್ಯರು ರವರ ಪ್ರಯತ್ನದಿಂದ 2013 ರಲ್ಲಿ ಅಂದಿನ ಯು.ಪಿ.ಎ ಸರ್ಕಾರವು ಭಾರತ ಸಂವಿಧಾನಕ್ಕೆ ತಿದ್ದುಪಡಿ ತಂದು 371 ಜೆ ಕಲಂ ಅಡಿಯಲ್ಲಿ ಹೆಚ್.ಕೆ.ಆರ್.ಡಿ.ಬಿ ಮಂಡಳಿಯು ರಚನೆಯಾಯಿತು. ಮಾನ್ಯ ಶ್ರೀ ಸಿದ್ದರಾಮಯ್ಯ, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಇವರ ಅವಧಿಯಲ್ಲಿ ಮಂಡಳಿಯು 2013 ರಲ್ಲಿ ಕರ್ನಾಟಕ ರಾಜ್ಯಪತ್ರ ಅಧಿಸೂಚನೆ ದಿನಾಂಕ:06.11.2013 ರ ಮೂಲಕ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು (ಹೈ.ಕ.ಪ್ರ.ಅ.ಮಂಡಳಿ) ಕಲಬುರಗಿಯಲ್ಲಿ ಸ್ಥಾಪಿಸಲಾಯಿತು.

ಮಂಡಳಿಯ ವಿವರಗಳು ಕೆಳಕಂಡಂತೆ ಇರುತ್ತವೆ:

ಸ್ಥಾಪನೆ:

ಹೈದರಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿಮಂಡಳಿಯು ಕರ್ನಾಟಕ ರಾಜ್ಯಪತ್ರ ದಿನಾಂಕ:06.11.2013 ರ ಪ್ರಕಾರ ದಿನಾಂಕ:06.11.2013 ರಂದು ಸ್ಥಾಪಿಸಲಾಗಿದೆ.

ವ್ಯಾಪ್ತಿ:

ಮಂಡಳಿವ್ಯಾಪ್ತಿಗೆ 40 ವಿಧಾನಸಭಾಕ್ಷೇತ್ರಗಳು(ಇತ್ತೀಚಿನ ವಿಧಾನ ಸಭಾ ಕ್ಷೇತ್ರಗಳ ಪುನರ್‍ರಚನೆ ಪ್ರಕಾರ) ಒಳಗೊಂಡಿದ್ದು, ಸದರಿ ಮಂಡಳಿ ವ್ಯಾಪ್ತಿಯಲ್ಲಿ ಬೀದರ್, ಬಳ್ಳಾರಿ, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತುಯಾದಿಗಿರಿ ಜಿಲ್ಲೆಗಳನ್ನು ಒಳಗೊಂಡಿರುತ್ತದೆ.

ಸದಸ್ಯರು:

  • 1. ಹೆಚ್ ಕೆ ಪ್ರದೇಶ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರು ಸದರಿ ಮಂಡಳಿಗೆ ಸದಸ್ಯರಾಗಿದ್ದು, ಇದರಲ್ಲಿರಾಜ್ಯ ಸರ್ಕಾರವು ನಾಮನಿರ್ದೇಶನ ಮಾಡಿದಒಬ್ಬ ಸಚಿವರುಮಂಡಳಿಯ ಅಧ್ಯಕ್ಷರಾಗಿಕಾರ್ಯನಿರ್ವಹಿಸುತ್ತಾರೆ.
  • 2. ಕರ್ನಾಟಕರಾಜ್ಯ ಸರ್ಕಾರವು ಸರದಿಸುತ್ತು ಆಧಾರದ ಮೇಲೆ ಮಂಡಳಿಗೆ ಒಂದು ವರ್ಷದ ಅವಧಿಗೆ ಎಂಟು ವಿಧಾನ ಸಭಾ ಸದಸ್ಯರನ್ನು ನಾಮನಿರ್ದೇಶನ ಮಾಡುತ್ತಾರೆ.
  • 3. ಕರ್ನಾಟಕರಾಜ್ಯ ಸರ್ಕಾರವು ಸರದಿ ಸುತ್ತುಆಧಾರದ ಮೇಲೆ ಮಂಡಳಿಗೆ ಒಂದು ವರ್ಷದಅವಧಿಗೆ ಎರಡು ವಿಧಾನ ಪರಿಷತ್‍ಸದಸ್ಯರನ್ನು ನಾಮನಿರ್ದೇಶನ ಮಾಡುತ್ತಾರೆ.
  • 4. ಹೈ.ಕ ಪ್ರದೇಶದ ವ್ಯಾಪ್ತಿಯಲ್ಲಿ ಭಾಗಾಂಶ ಅಥವಾ ಪೂರ್ಣ ಪ್ರಮಾಣದಲ್ಲಿಲೋಕಸಭಾಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರನ್ನು ಸರದಿ ಸುತ್ತುಆಧಾರದ ಮೇಲೆ ಕರ್ನಾಟಕ ರಾಜ್ಯಸರ್ಕಾರವು ಮಂಡಳಿಗೆ ಒಂದು ವರ್ಷ ಅವಧಿಗೆ ಸದಸ್ಯರೆಂದು ನಾಮನಿರ್ದೇಶನ ಮಾಡುತ್ತದೆ.
  • 5. ಸ್ಥಳೀಯ ಸಂಸ್ಥೆಗಳಿಂದ (ಜಿಲ್ಲಾ ಪಂಚಾಯತ) sಸರದಿ ಸುತ್ತುಆಧಾರದ ಮೇಲೆ ಮಂಡಳಿಗೆ ಒಂದು ವರ್ಷದ ಅವಧಿಗೆ ಕರ್ನಾಟಕರಾಜ್ಯ ಸರ್ಕಾರವು ಒಬ್ಬ ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನು ಸದಸ್ಯರೆಂದು ಮಂಡಳಿಗೆ ನಾಮನಿರ್ದೇಶನ ಮಾಡುತ್ತದೆ.
  • 6. ಸರದಿ ಸುತ್ತುಆಧಾರದ ಮೇಲೆ ಒಂದು ವರ್ಷದಅವಧಿಗೆಕರ್ನಾಟಕರಾಜ್ಯ ಸರ್ಕಾರವುನಗರ ಸ್ಥಳೀಯ ಸಂಸ್ಥೆಗಳಿಂದ ಒಬ್ಬ ಅಧ್ಯಕ್ಷರನ್ನು/ ಮೇಯರ್‍ರನ್ನು ಸದಸ್ಯರೆಂದು ಮಂಡಳಿಗೆ ನಾಮನಿರ್ದೇಶನ ಮಾಡುತ್ತದೆ.
  • 7. ಕೆಳಕಂಡ ಕ್ಷೇತ್ರಗಳಿಂದ ಪರಿಣಿತರನ್ನು ಕರ್ನಾಟಕ ರಾಜ್ಯಸರ್ಕಾರವು ಎರಡು ವರ್ಷದ ಅವಧಿಗೆ ಸದಸ್ಯರೆಂದು ಮಂಡಳಿಗೆ ನಾಮನಿರ್ದೇಶನ ಮಾಡುತ್ತದೆ. -
    • 1) ಯೋಜನಾ ಪ್ರಕ್ರೀಯೆಯಲ್ಲಿ ಪರಿಣಿತರನ್ನು
    • 2) ಹಣಕಾಸು ವಿಷಯಗಳಿಗೆ ಮತ್ತು ಲೆಕ್ಕದಲ್ಲಿ ಪರಿಣಿತರನ್ನು
    • 3)ನೀರಾವರಿ ಮತ್ತು ಲೋಕೋಪಯೋಗಿ ಕ್ಷೇತ್ರದಲ್ಲಿ ಪರಿಣಿತರನ್ನು
    • 4) ಕೃಷಿ ಮತ್ತು ಕೈಗಾರಿಕಾ ವಲಯದಲ್ಲಿ ಪರಿಣಿತರನ್ನು
    • 5) ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಪರಿಣಿತರನ್ನು
  • 8. ಪ್ರಾದೇಶಿಕ ಆಯುಕ್ತರು, ಕಲಬುರಗಿ ಇವರನ್ನು ಪದನಿಮಿತ್ಯ ಸದಸ್ಯರೆಂದು ಮಂಡಳಿಗೆ ಇರುತ್ತಾರೆ.
  • 9. ಸರ್ಕಾರದ ಕಾರ್ಯದರ್ಶಿಗಳು ಯೋಜನಾ ಇಲಾಖೆ ಇವರು ಪದ ನಿಮಿತ್ಯ ಸದಸ್ಯರೆಂದು ಮಂಡಳಿಗೆ ಇರುತ್ತಾರೆ.
  • 10. ಸರ್ಕಾರದ ಕಾರ್ಯದರ್ಶಿಗಳು ಹಣಕಾಸು ಇಲಾಖೆ ಇವರು ಪದನಿಮಿತ್ಯ ಸದಸ್ಯರೆಂದು ಮಂಡಳಿಗೆ ಇರುತ್ತಾರೆ.
  • 11. ಮಂಡಳಿಯ ಕಾರ್ಯದರ್ಶಿಗಳು ಸದಸ್ಯ ಕಾರ್ಯದರ್ಶಿಗಳೆಂದು ಮಂಡಳಿಗೆ ಇರುತ್ತಾರೆ.

ಅನುಷ್ಠಾನ ಸಮಿತಿ:

ಮಂಡಳಿಗೆ ಒಂದು ಅನುಷ್ಠಾನ ಸಮಿತಿ ಇದ್ದು, ಅದು ಮಂಡಳಿಯ ಅಧ್ಯಕ್ಷರನ್ನು/ಕಾರ್ಯದರ್ಶಿಗಳನ್ನು ಒಳಗೊಂಡಿರುತ್ತದೆ. ಅದು ಅಲ್ಲದೆ ಆರು ಜಿಲ್ಲೆಯ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಜಿಲ್ಲಾ ಪಂಚಾಯತ್, ಆಡಳಿತ ಅಧಿಕಾರಿಗಳು ಕಾಡಾ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಪಶು ಸಂಗೋಪನಾ ಇಲಾಖೆ ಹಾಗು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಹೈ.ಕ. ಪ್ರದೇಶ ವ್ಯಾಪ್ತಿಯನ್ನೊಳಗೊಂಡ ಮುಖ್ಯ ಇಂಜನೀಯರು, ಕುಲಪತಿಗಳು, ಗುಲಬರ್ಗಾ ವಿಶ್ವ ವಿದ್ಯಾಲಯ ಕಲಬುರಗಿ ಮತ್ತು ರಾಜ್ಯ ಸರ್ಕಾರದಿಂದ ನೇಮಿಸಲ್ಪಟ್ಟ ಇನ್ನುಳಿದ ಇಲಾಖಾ ಅಧಿಕಾರಿಗಳನ್ನು ಒಳಗೊಂಡಿರುತ್ತದೆ.